ಗ್ಯಾಂಗ್ಟ್‍ಸೆ-
ಮಧ್ಯ ಟಿಬೆಟಿನ ಒಂದು ಪಟ್ಟಣ. ನ್ಯಾಂಗ್ ಚು ನದಿಯ ದಂಡೆಯ ಮೇಲೆ ಇದೆ. ಜನಸಂಖ್ಯೆ ಸು. 10,000, ಗಿರಿಯೇಣೊಂದರ ಮೇಲೆ ನಿರ್ಮಿತವಾದ ಈ ನಗರದ ಎರಡು ಮುಖ್ಯ ಕಟ್ಟಡಗಳಲ್ಲಿ ಒಂದು ಇಲ್ಲಿಯ ಕೋಟೆ. ಅದು ಈಗ ಸ್ಥಳೀಯ ನ್ಯಾಯಾಲಯ. ಇನ್ನೊಂದು, ಲಾಮಗಳ ಮಠವಾಗಿದ್ದ ಕಟ್ಟಡ. 1954 ರ ಪ್ರವಾಹದಲ್ಲಿ ಈ ನಗರ ಬಹುತೇಕ ನಾಶವಾಗಿತ್ತು. ಈಗ ಇದನ್ನು ಮತ್ತೆ ನಿರ್ಮಿಸಲಾಗಿದೆ.

ಗ್ಯಾಂಗ್ಟ್‍ಸೆ ಒಂದು ವ್ಯಾಪಾರ ಕೇಂದ್ರ. ಲಾಸ, ಷಿಗಾಟ್ಸೆ, ಯೂಟುಂಗ್‍ಗಳಿಗೆ ಇಲ್ಲಿಂದ ಹೆದ್ದಾರಿಯುಂಟು. ಉಣ್ಣೆ, ತುಪ್ಪುಳು, ಷಿಗಾಟ್ಸೆ, ಯೂಟುಂಗ್‍ಗಳಿಗೆ ಇಲ್ಲಿಂದ ಹೆದ್ದಾರಿಯುಂಟು. ಉಣ್ಣೆ, ತುಪ್ಪುಳು, ಕಸ್ತೂರಿ, ಬೆಣ್ಣೆ, ಬಾರ್ಲಿ, ಚಹ, ಹೊಗೆಸೊಪ್ಪು, ಸಕ್ಕರೆ, ಹತ್ತಿ, ಜವಳಿ, ಒಣಗಿದ ಹಣ್ಣು, ಕಬ್ಬಿಣ ಸಾಮಾನು, ಮರದ ಬೋಗುಣಿ, ಅಕ್ಕಿ, ಮುಂತಾದ ಸರಕುಗಳು ಇಲ್ಲಿಗೆ ಬರುತ್ತದೆ.
										(ಎನ್.ಸಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ